Contact For Add

ಹೊರನಾಡ ಕನ್ನಡ ಸಂಘಗಳ ಮಹಾಮೇಳಕ್ಕೆ ಅದ್ಧೂರಿ ಚಾಲನೆ

ಪ್ರತಿಯೊಬ್ಬರಿಗೂ ತಮ್ಮ ಮಾತೃಭಾಷೆ ಜೀವದ ಭಾಷೆ, ಬೇರೆ ಬೇರೆ ಬಾಷೆಯನ್ನು ಕಲಿತರೇ ಬದುಕಿನ ಭಾಷೆಯಾಗಿ ಉತ್ತುಂಗದ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ನೂರು ವರುಷ ದಾಟಿದ ಪಾಟೀಲ ಪುಟ್ಟಪ್ಪನವರ ನೇತೃತ್ವದ ಈ ಸಮ್ಮೇಳನ ಹೊರನಾಡು ಕನ್ನಡಿಗರ ಮತ್ತು  ಮಹಾರಾಷ್ಟ್ರ ಅಕ್ಕಲಕೋಟೆಯ ಕನ್ನಡಿಗರ ಮನಸ್ಸಿನಲ್ಲಿ ಮನೆಮಾಡಿ ಪೋಷಿಸುವ ಕಾರ್ಯಕ್ಕೆ ಶಕ್ತಿ ತುಂಬಲಿ ಎಂದು ಸಾನಿಧ್ಯ ವಹಿಸಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ, ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಅಕ್ಕಲಕೋಟ ಮತ್ತು ಅಕ್ಕಲಕೋಟೆಯ ಎಲ್ಲ ಕನ್ನಡ ಸಂಘಗಳ ಸಹಕಾರದದೊಂದಿಗೆ ಅನ್ನಛತ್ರ ಮಂಡಳದ ಆವರಣದಲ್ಲಿ ಹಮ್ಮಿಕೊಂಡ ಎರಡು ದಿನಗಳ ಅಖಿಲ ಭಾರತ ಹೊರನಾಡು ಕನ್ನಡ ಸಂಘಗಳ 8 ನೇ ಮಹಾಮೇಳದ ಉದ್ಘಾಟನೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡುತ್ತಾ ಕನ್ನಡ ಮಾತನಾಡುವುದು ಒಂದು ಆನಂದ, ಅದರಲ್ಲಿ ಜೀವಿಸುವದು ಪರಮಾನಂದ ಇಂತಹ ಕನ್ನಡವನ್ನು ಸದಾ ರಕ್ಷಿಸಿ, ಬೆಳೆಸಿ, ಪೋಷಿಸುವ ಕಾರ್ಯವನ್ನು ಪಾಪು ನೇತೃತ್ವದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಮಾಡುತ್ತಿರುವುದು ಕನ್ನಡ ಮನಸ್ಸುಗಳಿಗೆ ಸಂತೋಷದಾಯಕವಾದ ಸಂಗತಿಯಾಗಿದೆ. ಬೇರೆ ಬೇರೆ ರಾಷ್ಟ್ರದ ಜನರು ತಮ್ಮ ತಮ್ಮ ಭಾಷೆಗೆ ಮಾತ್ರ  ಸೀಮಿತವಾಗಿದ್ದರೆ ಕನ್ನಡಿಗರು ಯಾವ ಭಾಷೆಯನ್ನು ಸಹ ಸಮರ್ಥವಾಗಿ ಮಾತನಾಡುತ್ತಾ ಎಲ್ಲದರಲ್ಲೂ ಜಯಶಾಲಿಗಳಾಗಿ ಬರುತ್ತಾರೆ. ಅಕ್ಕಲಕೋಟೆಯ ಜನರು ಮರಾಠಿಯ ಜತೆಯಲ್ಲಿ  ಎಲ್ಲವನ್ನು  ಪ್ರೀತಿಸುತ್ತಾ ಕನ್ನಡವನ್ನು ಪೂಜಿಸುತ್ತಾ ರಕ್ಷಿಸಿ ಪೆÇೀಷಿಸುವ ಕಾರ್ಯಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಮುಖ್ಯ ಕಾರ್ಯಕಾರಿ ವಿಶ್ವಸ್ಥ ಯುವರಾಜ ಅಮೋಲರಾಜೆ ಜನ್ಮೇಜಯರಾಜೆ ಭೋಸಲೆ ಮಹಾರಾಜರು ಉದ್ಘಾಟಿಸಿದರು.
ಅತಿಥಿಗಳಾಗಿ ಆಗಮಿಸಿದ ಹಿರಿಯ ನ್ಯಾಯವಾದಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಮೋಹನ ಲಿಂಬಿಕಾಯಿ ಮಾತನಾಡಿ ಹೊರನಾಡಿನಲ್ಲಿ ಕನ್ನಡಿಗರಿಗೆ ಸಾಕಷ್ಟು ತೊಂದರೆ ಇದೆ. ಅದನ್ನು ಸಮರ್ಥವಾಗಿ ಎಲ್ಲ ತೊಂದರೆಗಳನ್ನು ಬಗ್ಗೆಹರಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗಿ ಕೆಲಸ ನಿರ್ವಹಿಸಬೇಕು ಮತ್ತು ಹೊರ ರಾಜ್ಯಗಳಲ್ಲಿ ಕನ್ನಡ ಭಾಷೆಯ ಮೇಲೆ ಅಭಿಮಾನಿಗಳು, ಕನ್ನಡ ಶಾಲೆಗಳು ಇವೆ. ಅವುಗಳನ್ನು ಉಳಿಸಿ ಬೆಳೆಸಬೇಕಿದೆ. ಜಯದೇವಿತಾಯಿ ಲಿಗಾಡೆಯಂತಹ ಕನ್ನಡದ ತಾಯಿಯನ್ನು ನೀಡಿದ ಮಹಾರಾಷ್ಟ್ರ, ಗೋಕಾಕ ವರದಿ ಜಾರಿಯಾಗಲು ಕರ್ನಾಟಕ ವಿದ್ಯಾವರ್ಧಕ ಸಂಘ ಹೋರಾಡಿದೆ. ಅದಕ್ಕಾಗಿ ಸಂಘಕ್ಕೆ ಗೌರವ ಸಲ್ಲಬೇಕು. ಸಂಘದ ಪ್ರತಿಯೊಂದು ಕಾರ್ಯಕ್ಕೆ ಸಹಕಾರವಿದೆ ಎಂದು ಹೇಳಿದರು.
ಚಿಂತಕರು, ಪತ್ರಕರ್ತರಾದ ರಂಜಾನ ದರ್ಗಾ ಮಾತನಾಡಿ, ಹೊರನಾಡು ಕನ್ನಡಿಗರಿಗೆ ಇಬ್ಬರು ತಾಯಂದಿರರು. ಒಬ್ಬರು ಮಾತೃತಾಯಿ ಇನ್ನೊಬ್ಬರು ಪೋಷಿಸಿದ ತಾಯಿ. ಈ ಇಬ್ಬರ ತಾಯಿ ಮಧ್ಯ ಕನ್ನಡಿಗರು ಬಳಲುತ್ತಿರುವುದು ಬೇಸರದ ಸಂಗತಿ. ಆದರು ಹೊರನಾಡಿನಲ್ಲಿರುವ ಕನ್ನಡಿಗರು ಕನ್ನಡದ ಜತೆ ಆ ರಾಜ್ಯದ ಭಾಷೆಯನ್ನು ಸಾಂಸ್ಕøತಿಕ, ಸಾಹಿತ್ಯ ಕಲೆಗಳೊಂದಿಗೆ ಬೇರೆಸಿ ಕನ್ನಡವನ್ನು ಶ್ರೀಮಂತ ಮಾಡುತ್ತಿದ್ದಾರೆ. ಅಂತಹ ಕನ್ನಡಿಗರ ಅಭಿವೃದ್ಧಿಗಾಗಿ ಆಯಾ ರಾಜ್ಯದಲ್ಲಿ ಹೊರನಾಡು ಕನ್ನಡಿಗರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಕನ್ನಡ, ಕನ್ನಡಕ್ಕಾಗಿ ಶ್ರಮಿಸಿದವರ ನೆನೆಪಿಸುವ ಕಾರ್ಯ, ಅಲ್ಲಿ ಸಂಸ್ಕೃತಿಗಳ ಪೋಷಿಸುವ ಕಾರ್ಯವಾಗಬೇಕು. ಅಲ್ಲದೆ ಕರ್ನಾಟಕ ಸರಕಾರ ಇದಕ್ಕೆ ಪೂರಕ ಸಹಕಾರ ನೀಡಿ ಈ ಮಹಾಮೇಳದ ನೆನಪಿನಲ್ಲಿ ಅಕ್ಕಲಕೊಟದಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕು. ಹೊರನಾಡು ಕನ್ನಡಿಗರಿಗೆ ಕರ್ನಾಟಕದ ಉದ್ಯೋಗದಲ್ಲಿ ಶೇಕಡಾ 5 ರಷ್ಟು ಕೃಪಾಂಕ ನೀಡಿ ಅವರಿಗೆ ಪೆÇ್ರೀತ್ಸಾಹಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಮಾತನಾಡಿ ಕನ್ನಡ ಮಾತನಾಡಬೇಕಾದರೆ  ಅಕ್ಕಲಕೋಟಗೆ ಬರಬೇಕು, ಬಂದವರು ಯಾರು ಹಾಗೇ ಹೋಗುವುದಿಲ್ಲ  ಕನ್ನಡದೊಂದಿಗೆ ಕನ್ನಡಿಗರಾಗಿ ಹೋಗುತ್ತಾರೆ. ಇಂತಹ ಅಕ್ಕಲಕೋಟೆಯಲ್ಲಿ ಮಹಾಮೇಳ ನಡೆಯುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೈರನಟ್ಟಿಯ ದೊರೆಸ್ವಾಮಿಮಠದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು, ಅಕ್ಕಲಕೋಟೆಯ ಬಸವಲಿಂಗ ಮಹಾಸ್ವಾಮಿಗಳು, ನಾಗಣಸೂರಿನ ಅಭಿನವ ಬಸವಲಿಂಗ ಮಹಾಸ್ವಾಮಿಗಳು, ತೋಳನೂರಿನ ಚೆನ್ನಮಲ್ಲ ಮಹಾಸ್ವಾಮಿಗಳು, ಮಿಲನದಾದಾ ಕಲ್ಯಾಣಶೆಟ್ಟಿ, ರಾಜಕುಮಾರ ಜಿಂಗಾಡೆ ಉಪಸ್ಥಿತರಿದ್ದರು.
ನಾಡು ನುಡಿಗಾಗಿ ಶ್ರಮಿಸಿದ ಮಹನೀಯರಾದ ಶಿವಶರಣ ಮಾಡ್ಯಾಳ, ಡಾ.ಮಧುಮಾಲ ಲಿಗಾಡೆ, ಧರ್ಮರಾಜ ಕಾಡಾದಿ, ಸುಭಾಸ ಬೆಳ್ಳುಬ್ಬಿ, ಎಸ್.ಕೆ.ಬಿರಾದಾರ, ಮಲ್ಲಿಕಾರ್ಜುನ ಮಡ್ಡೆ, ಆರ್.ಕೆ.ಪಾಟೀಲ, ಡಾ. ಮಹಮ್ಮದ ಆಜಂ, ಪ್ರಕಾಶ ವಿಭೂತಿ ಮತ್ತು ಸಿದ್ರಾಮಪ್ಪ ಮುಂಡೋಡಗಿ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಅನೀಲ ಮೇತ್ರಿ ಮತ್ತು ಮಹಾನಂದಾ ಗೋಸಾವಿ ಅವರ ತಂಡದವರು ವಂದೆ ಮಾತರಂ, ನಾಡಗೀತೆ ಮತ್ತು ಉದಯವಾಗಲಿ ಚೆಲುವ ಕನ್ನಡನಾಡು ಗೀತೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ವಿಶ್ವೇಶ್ವರಿ ಬ ಹಿರೇಮಠ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್ ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆದರ್ಶ ಕನ್ನಡ ಬಳಗದ ಉಪಾಧ್ಯಕ್ಷರಾದ ಬಸವರಾಜ ಧನಶೆಟ್ಟಿ ವಂದಿಸಿದರು.
ಸಂಘದ ಪದಾಧಿಕಾರಿಗಳಾದ ಶಿವಣ್ಣ ಬೆಲ್ಲದ, ನಿಂಗಣ್ಣ ಕುಂಟಿ, ಸದಾನಂದ ಶಿವಳ್ಳಿ, ಸತೀಶ ತುಮರಿ, ಶಾಂತೇಶ ಗಾಮನಗಟ್ಟಿ, ಶಂಕರ ಕುಂಬಿ, ಮನೋಜ ಪಾಟೀಲ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ಶಿವಾನಂದ ಅಂಬಡಗಟ್ಟಿ, ಗುರುರಾಜ ಹುಣಸಿಮರದ, ಡಾ.ಲಿಂಗರಾಜ ಅಂಗಡಿ, ಡಾ. ಐ ಜಿ ಸನದಿ, ಮಾರ್ತಾಂಡಪ್ಪ ಎಮ್ ಕತ್ತಿ. ಸಂಘದ ಸದಸ್ಯರು ಹಾಗೂ ಅಕ್ಕಲಕೋಟೆಯ ಕನ್ನಡಿಗರು ಉಪಸ್ಥಿತಿ ಇದ್ದರು.

ಹೊರನಾಡ ಕನ್ನಡ ಸಂಘಗಳ ಮಹಾಮೇಳಕ್ಕೆ ಅದ್ಧೂರಿ ಚಾಲನೆ ಹೊರನಾಡ ಕನ್ನಡ ಸಂಘಗಳ ಮಹಾಮೇಳಕ್ಕೆ ಅದ್ಧೂರಿ ಚಾಲನೆ Reviewed by MediaMind24x7 Team on December 22, 2019 Rating: 5

No comments:

Powered by Blogger.