ಬೊಮ್ಮನಹಳ್ಳಿ; ಮಠದ ಓಣಿಯಲ್ಲಿ ಆಹಾರ ಕಿಟ್ ವಿತರಣೆ
ಹಾವೇರಿ: ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ಕೊರೊನಾ ಸೋಂಕಿತರೊಬ್ಬರು ಕಂಡುಬಂದಿರುವ ಮಠದ ಓಣಿಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದ್ದು, ಓಣಿಯ ನಿವಾಸಿಗಳಿಗೆ ಭಾನುವಾರ ಆಹಾರ ಕಿಟ್ ವಿತರಿಸಲಾಯಿತು.
ಬಿಜೆಪಿ ಮುಖಂಡ ಪಿ.ಆರ್.ಕುಂದಾಪುರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಮಠದ ಓಣಿಯ ಮನೆ ಮನೆಗೆ ತೆರಳಿ ದಿನಸಿ ಕಿಟ್‌ಗಳನ್ನು ಹಂಚಿದರು.
ಓಣಿಯಲ್ಲಿರುವ ಪ್ರತಿ ಮನೆಗಳಿಗೂ ದಿನಸಿ ವಿತರಿಸಲಾಯಿತು. ಕೊರೊನಾ ಹರಡದಂತೆ ಜಾಗೃತಿ ವಹಿಸುವಂತೆ ಜಾಗೃತಿ ಮೂಡಿಸಲಾಯಿತು.
ಬಿಜೆಪಿ ಮುಖಂಡ ಪಿ.ಆರ್.ಕುಂದಾಪುರ ಮಾತನಾಡಿ, 'ಕೊರೊನಾದಿಂದ ಎಲ್ಲರೂ ಜಾಗೃತರಾಗಬೇಕು. ಮಾಸ್ಕ್ ಧರಿಸಬೇಕು. ಪದೇ ಪದೇ ಕೈ ತೊಳೆದುಕೊಳ್ಳಬೇಕು. ಸಾಮಾಜಿಕ ಅಂತರ ಪಾಲಿಸಬೇಕು' ಎಂದರು.
'ಇಡೀ ಜಗತ್ತೇ ಕೊರೊನಾದಿಂದ ಬಳಲುತ್ತಿದೆ. ಜಾಗೃತಿ ಹಾಗೂ ಮುಂಜಾಗ್ರತಾ ಕ್ರಮಗಳೇ ಇದಕ್ಕೆ ಮದ್ದು. ಮಠದ ಓಣಿಯ ಜನ, ಯಾವುದಕ್ಕೂ ಹೆದರಬಾರದು. ನಿಮ್ಮ ಜೊತೆ ನಾವಿದ್ದೇವೆ' ಎಂದೂ ಧೈರ್ಯ ತುಂಬಿದರು.
ಗ್ರಾಮದ ಬಿಜೆಪಿಯ ಯುವ ಕಾರ್ಯಕರ್ತರೇ 'ಪಿ.ಆರ್. ಕುಂದಾಪುರ ಅಭಿಮಾನಿಗಳ ಬಳಗ' ಕಟ್ಟಿಕೊಂಡು ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಸೀಲ್‌ಡೌನ್ ಆದ ಪ್ರದೇಶಗಳಿಗೆ ತೆರಳಿ ದಿನಸಿ ವಿತರಿಸಿ ನಿವಾಸಿಗಳಿಗೆ ಧೈರ್ಯ ತುಂಬುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಗ್ರಾಮದ ಗೌಡರ ಓಣಿಯಲ್ಲೂ ದಿನಸಿ ಕಿಟ್ ವಿತರಿಸಲಾಗಿತ್ತು.
ಬೊಮ್ಮನಹಳ್ಳಿ; ಮಠದ ಓಣಿಯಲ್ಲಿ ಆಹಾರ ಕಿಟ್ ವಿತರಣೆ
Reviewed by MediaMind24x7 Team
on
July 26, 2020
Rating:
Reviewed by MediaMind24x7 Team
on
July 26, 2020
Rating:
No comments: