ಲೋಕಾಯುಕ್ತರಿಗೆ ಚಾಕು ಇರಿತ: ಕೃತ್ಯಕ್ಕೆ ಪೀಠೋಪಕರಣ ಗುತ್ತಿಗೆ ಕಾರಣ?
ವಿಶ್ವನಾಥ್ ಶೆಟ್ಟಿ
ಕರ್ನಾಟಕ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರಿಗೆ, ಅವರ ಕಚೇರಿಯಲ್ಲೇ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ತೀವ್ರ ಗಾಯಗೊಂಡಿರುವ ವಿಶ್ವನಾಥ್ ಅವರಿಗೆ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಧಾನಸೌಧದ ಪಕ್ಕದಲ್ಲೇ ಇರುವ ಲೋಕಾಯುಕ್ತ ಕಚೇರಿಯಲ್ಲಿ ಬುಧವಾರ (ಮಾ. 7) ಈ ಘಟನೆ ನಡೆದಿದೆ. ಆರೋಪಿ ತುಮಕೂರಿನ ತೇಜರಾಜ್ ಶರ್ಮಾ ಎಂಬಾತನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಿಗ್ಗೆ ಕಚೇರಿಗೆ ಬಂದಿದ್ದ ತೇಜರಾಜ್,, ಕೂಗಾಡುತ್ತಿದ್ದ. ಏಕಾಏಕಿ ವಿಶ್ವನಾಥ್ ಅವರ ಕಚೇರಿಗೆ ಹೋಗಿ ಗಲಾಟೆ ಮಾಡಿದ್ದ. ಕೊಠಡಿಗೆ ಹೋಗುವಾಗಲೂ ಆತನನ್ನು ಯಾರು ತಡೆದಿರಲಿಲ್ಲ. ಕೆಲ ನಿಮಿಷ ವಿಶ್ವನಾಥ್ ಕೊಠಡಿಯಲ್ಲೇ ಇದ್ದ ಆತ, ಅದೇ ವೇಳೆ ಚಾಕುವಿನಿಂದ ಚುಚ್ಚಿದ್ದ. ವಿಶ್ವನಾಥ್ ಅವರು ಕಿರುಚುತ್ತಿದ್ದಂತೆ ಸಹಾಯಕ್ಕೆ ಬಂದ ಸಿಬ್ಬಂದಿ, ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಪರಾರಿಯಾಗಲು ಯತ್ನಿಸಿದ್ದ ಆರೋಪಿ ತೇಜರಾಜ್‌ನನ್ನು ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಕೃತ್ಯಕ್ಕೆ ಪೀಠೋಪಕರಣ ಗುತ್ತಿಗೆ ಕಾರಣ:
ಆರೋಪಿ ತೇಜರಾಜ್
ಶರ್ಮಾ, ತುಮಕೂರಿನ ಅಶೋಕನಗರದವನು. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ
ಪೀಠೋಪಕರಣಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಕೆಲವು ಸರ್ಕಾರಿ
ಕಚೇರಿಗಳಿಗೆ ಪೀಠೋಪಕರಣಗಳನ್ನು ಪಡೆಯಲು ಗುತ್ತಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದ.
ಅಲ್ಲೆಲ್ಲ ಲಂಚಕ್ಕಾಗಿ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಗುಣಮಟ್ಟದ ಪೀಠೋಪಕರಣ
ಪೂರೈಸುತ್ತೇನೆ. ನಾನು ಲಂಚ ಕೊಡುವುದಿಲ್ಲವೆಂದಿದ್ದ ಶರ್ಮಾ, ಆ ಬಗ್ಗೆ ಲೋಕಾಯುಕ್ತರಿಗೆ
ದೂರು ನೀಡಿದ್ದ. ಆದರೆ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಅದೇ ರೀತಿ 15 ಬಾರಿ ದೂರು ನೀಡಿದ್ದ. ಅದಾದ ನಂತರವೂ ಯಾವುದೇ ಪ್ರಯೋಜನವಾಗದಿದ್ದರಿಂದಲೇ
ಆತ ಕಚೇರಿಗೆ ಬಂದು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.
ತೇಜಸ್‌ಶರ್ಮಾ
‘ಆತ ಆರ್‌ಟಿಐ ಕಾರ್ಯಕರ್ತನೂ ಆಗಿದ್ದ. ಕೆಲವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಎಂಬ ಮಾಹಿತಿಯೂ ಇದೆ. ಆ ಬಗ್ಗೆ ವಿಚಾರಿಸುತ್ತಿದ್ದೇವೆ’ ಎಂದರು.
ಲೋಕಾಯುಕ್ತರಿಗೆ ಚಾಕು ಇರಿತ: ಕೃತ್ಯಕ್ಕೆ ಪೀಠೋಪಕರಣ ಗುತ್ತಿಗೆ ಕಾರಣ?
Reviewed by MediaMind24x7 Team
on
March 07, 2018
Rating:
Reviewed by MediaMind24x7 Team
on
March 07, 2018
Rating:

No comments: