ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ; ಸೆಪ್ಟೆಂಬರ್ ಅಂತ್ಯಕ್ಕೆ ವಿಸ್ತೃತ ವರದಿ ಸಿದ್ಧ - ಸಚಿವ ಜಗದೀಶ ಶೆಟ್ಟರ್
ಧಾರವಾಡ (ಜೂನ್ 29): ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ, ಏತ ನೀರಾವರಿ, ಕೆರೆ ತುಂಬುವ ಹಾಗೂ ಹಳ್ಳದ ಹರಿವಿನ ವ್ಯಾಪ್ತಿಯಲ್ಲಿ ಹೂಳು ಎತ್ತುವ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ಡ್ರೋಣ್ ಹಾಗೂ ಡಿಜಿಪಿಎಸ್ ಉಪಕರಣಗಳಿಂದ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡು, ಸೆಪ್ಟೆಂಬರ್ ಅಂತ್ಯದೊಳಗೆ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರು ಹೇಳಿದರು.
ನವಲಗುಂದ ತಾಲ್ಲೂಕಿನ ಶಿರೂರು ಗ್ರಾಮದ ಬಳಿ ಯೋಜನೆಯ ಸರ್ವೆ ಕಾರ್ಯದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಸಚಿವರು, ಯೋಜನೆಯಿಂದ ಧಾರವಾಡ ಹಾಗೂ ನವಲಗುಂದ ತಾಲ್ಲೂಕಿನ ಸುಮಾರು 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಕಲ್ಪಿಸುವ ರೈತರ ಬಹುದಿನದ ಕನಸು ನನಸು ಮಾಡಲು ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಯೋಜನೆಯ ಹಿನ್ನೆಲೆ: ತುಪ್ಪರಿಹಳ್ಳವು ಬೆಳಗಾವಿ ಜಿಲ್ಲೆ ಕಿತ್ತೂರಿನ ಅವರಾದಿ ಗ್ರಾಮದ ಬಳಿ ಉಗಮವಾಗಿ ಧಾರವಾಡ ಹಾಗೂ ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 82 ಕಿ.ಮೀ ಹರಿದು ನವಲಗುಂದ ಪಟ್ಟಣದ ಹತ್ತಿರ ಬೆಣ್ಣೆ ಹಳ್ಳಕ್ಕೆ ಸೇರುತ್ತದೆ. ತುಪ್ಪರಿಹಳ್ಳ ಜಲಾನಯನ ಪ್ರದೇಶದ ಭಾಗದಲ್ಲಿ ಸರಾಸರಿ 550 ಮಿ.ಮೀ.ಮಳೆಯ ಪ್ರಮಾಣ ಹೊಂದಿರುತ್ತದೆ. ತುಪ್ಪರಿಹಳ್ಳದಲ್ಲಿ ಸುಮಾರು 3 ಟಿ.ಎಮ್.ಸಿ. ಸಾಮಥ್ರ್ಯದ ನೀರು ಪೆÇೀಲಾಗಿ ಹರಿದು ಬೆಣ್ಣೆಹಳ್ಳ ಸೇರುತ್ತದೆ.
ಹಳ್ಳವು ಸಾಕಷ್ಟು ಒತ್ತುವರಿಯಾಗಿದ್ದು, ದಿಢೀರನೇ ನೀರು ಹೆಚ್ಚಿ ಹಳ್ಳದ ಬದಿಯ ಗ್ರಾಮಗಳಿಗೆ ಮತ್ತು ಹೊಲಗಳಿಗೆ ನುಗ್ಗಿ ಪ್ರವಾಹ ಉಂಟು ಮಾಡಿ, ಪ್ರತಿವರ್ಷ ಹಳ್ಳವು ಸಾಕಷ್ಟು ಹಾನಿ ಉಂಟು ಮಾಡುತ್ತದೆ. 2010 ರಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಪ್ರವಾಹನಿಯಂತ್ರಣ ಯೋಜನೆಯನ್ನು ಜಲಸಂಪನ್ಮೂಲ ಇಲಾಖೆಗೆ ವರ್ಗಾಯಿಸಿ. ನೀರಾವರಿ ತಜ್ಞರಾದ ಪರಮಶಿವಯ್ಯರವರ ನೇತೃತ್ವದಲ್ಲಿ ವರದಿ ಸಲ್ಲಿಸಲು ಸಮಿತಿ ರಚಿಸಲಾಗಿತ್ತು. ಈ ವರದಿಯು 2012 ರಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಿದೆ.
ಈ ವರದಿ ಪ್ರಕಾರ 2017 ರಲ್ಲಿ ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣ ಯೋಜನಾ ವರದಿ ತಯಾರಿಸಲು ಇ.ಆಯ್. ಟೆಕ್ನಾಲಾಜಿಸ್ ಬೆಂಗಳೂರುರವರಿಗೆ ಟೆಂಡರ್ ಮುಖಾಂತರ ವಹಿಸಲಾಗಿರುತ್ತದೆ. 153 ಕೋಟಿ ರೂ.ಗಳ ವಿವರವಾದ ಯೋಜನಾ ವರದಿಯನ್ನು ಈಗಾಗಲೇ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಂದಾಜು ಪರಿಶೀಲನಾ ಸಮಿತಿಗೆ ಮಂಡಿಸಲಾಗಿದೆ. ಶೀಘ್ರವಾಗಿ ಸರಕಾರದ ಅನುಮೋದನೆ ಪಡೆಯಲಾಗುವುದು. ಮುಂದುವರೆದು 2017 ರಲ್ಲಿ ತುಪ್ಪರಿಹಳ್ಳಕ್ಕೆ ಕೃμÁ್ಣ ಅಚ್ಚುಕಟ್ಟು ಪ್ರದೇಶದಡಿಯ ಪೆÇಲ್ಲಾವರಮ್ ಸ್ಕೀಮಿನಡಿ, ಧಾರವಾಡ ಹಾಗೂ ನವಲಗುಂದ ತಾಲೂಕಿನ ಸುಮಾರು 10 ಸಾವಿರ ಹೆಕ್ಟೇರ ಜಮೀನುಗಳಿಗೆ ನೀರಾವರಿ ಕಲ್ಪಿಸಲು 1 ಟಿ.ಎಮ್.ಸಿ ನೀರಿನ ಹಂಚಿಕೆಯಾಗಿರುತ್ತದೆ.
ಹಂಚಿಕೆಯಾದ 1 ಟಿಎಂಸಿ ನೀರಿನ ಸದ್ಬಳಕೆಗೆ ಏತ ನೀರಾವರಿ ಯೋಜನೆ ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಹಾಗೂ ಕೆರೆ ತುಂಬುವ ಯೋಜನೆಯನ್ನೊಳಗೊಂಡ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಧಾರವಾಡ (ಗ್ರಾಮೀಣ) ಹಾಗೂ ನವಲಗುಂದ ಶಾಸಕರ ಪ್ರಯತ್ನದಿಂದಾಗಿ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ 50.00 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ. ಡ್ರ್ರೋಣ್ ಹಾಗೂ ಡಿ.ಜಿ.ಪಿ.ಎಸ್ ಉಪಕರಣಗಳಿಂದ ಸರ್ವೆ ಕಾರ್ಯ ಕೈಗೊಳ್ಳಲಾಗುತ್ತಿದೆ.
ಪ್ರವಾಹ ನಿಯಂತ್ರಣಕ್ಕಾಗಿ ಹೆಚ್ಚುವರಿ ನೀರನ್ನು ಮಲಪ್ರಭಾ ಜಲಾಶಯಕ್ಕೆ ತಿರುಗಿಸುವ ಯೋಜನೆಯು ಸಹ ಇದರಲ್ಲಿ ಒಳಗೊಂಡಿರುತ್ತದೆ. ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ, ಏತ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಯಲ್ಲಿ ಹಳ್ಳದ ಹರಿವಿನ ವ್ಯಾಪ್ತಿಯಲ್ಲಿ ಹೂಳು ಎತ್ತುವುದು, ಕಾಲುವೆಯ ರೀತಿ ಸೆಕ್ಷನಿಂಗ್ ಮಾಡುವುದು, ತಡೆಗೋಡೆ ನಿರ್ಮಾಣ, ಸಣ್ಣ ಬ್ಯಾರೇಜ್, ಸೇತುವೆಗಳ ನಿರ್ಮಾಣ, ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ಹಳ್ಳದ ನೀರಿನ ಸದ್ಬಳಕೆಗೆ ಏತ ನೀರಾವರಿ ಯೋಜನೆಯನ್ನೊಳಗೊಂಡು ಅಂದಾಜು 400 ಕೋಟಿ ರೂ. ಯೋಜನೆಯನ್ನು ರೂಪಿಸಲು ಶಕ್ಯತಾ ವರದಿಯನ್ನು ತಯಾರಿಸಲಾಗಿದೆ.
ಸರ್ವೆ ಕಾರ್ಯವು ಒಂದು ರೀತಿಯ ತಿಂಗಳ ಅವಧಿಯಲ್ಲಿ ಮುಕ್ತಾಯಗೊಂಡು ಸಪ್ಟೆಂಬರ್ ಅಂತ್ಯದವರೆಗೆ ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ / ಏತ ನೀರಾವರಿ ಹಾಗೂ ಕೆರೆ ತುಂಬುವ ವಿವರವಾದ ಯೋಜನಾ ವರದಿಯನ್ನು ಸರಕಾರಕ್ಕೆ ಅನುದಾನ ಕೋರಿ ಸಲ್ಲಿಸಲಾಗುವುದು. ಯೋಜನೆಯಿಂದ ಧಾರವಾಡ ಹಾಗೂ ನವಲಗುಂದ ತಾಲೂಕಿನ ಸುಮಾರು 10000 ಹೆಕ್ಟೇರ ಜಮೀನಿಗೆ ನೀರಾವರಿ ಕಲ್ಪಿಸಿ ಈ ಭಾಗದ ರೈತರ ಬಹುದಿನಗಳ ಕನಸು ನನಸಾದಂತಾಗುತ್ತದೆ.
ಧಾರವಾಡ ಶಾಸಕ ಅಮೃತ ದೇಸಾಯಿ, ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಲಪ್ರಭಾ ಬಲದಂಡೆ ಯೋಜನೆ ಅಧೀಕ್ಷಕ ಇಂಜಿನಿಯರ್ ರಾಜೇಶ ಅಮ್ಮಿನಭಾವಿ, ಕಾರ್ಯನಿರ್ವಾಹಕ ಇಂಜಿನಿಯರ್ ಅರವಿಂದ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಾಲಗಾರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಡಿವೈಎಸ್ಪಿ ರವಿನಾಯ್ಕ, ತಹಸೀಲ್ದಾರ ನವೀನ ಹುಲ್ಲೂರ ಮತ್ತಿತರರು ಇದ್ದರು.
ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ; ಸೆಪ್ಟೆಂಬರ್ ಅಂತ್ಯಕ್ಕೆ ವಿಸ್ತೃತ ವರದಿ ಸಿದ್ಧ - ಸಚಿವ ಜಗದೀಶ ಶೆಟ್ಟರ್
Reviewed by MediaMind24x7 Team
on
June 30, 2020
Rating:
Reviewed by MediaMind24x7 Team
on
June 30, 2020
Rating:
No comments: