Contact For Add

ಸಕಲ ಸೌಲಭ್ಯವಿರುವ ಮಾದರಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ನನ್ನ ಗುರಿ: ಉಸ್ತುವಾರಿ ಸಚಿವ ವಿನಯ ಕುಲಕರ್ಣಿ

ಧಾರವಾಡ (ಕರ್ನಾಟಕ ವಾರ್ತೆ) ಮಾ.೬: ಉತ್ತಮ ಸೌಲಭ್ಯಗಳನ್ನು ಹಾಗೂ ಉನ್ನತ ಉಪಕರಣಗಳನ್ನು ಹೊಂದಿರುವ ದೂಳ ಮುಕ್ತ ಹಸಿರು ಉದ್ಯಾನ ಉಳ್ಳ ಮಾದರಿ ಎನಿಸುವ ಜಿಲ್ಲಾ ಆಸ್ಪತ್ರೆಯನ್ನು ನಿರ್ಮಿಸುವದು ನನ್ನ ಗುರಿಯಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಹೇಳಿದರು.
ಅವರು ಇಂದು ಮದ್ಯಾಹ್ನದಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ನಗರ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂರು ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ನೆರವೆರಿಸಿ ಮಾತನಾಡಿದರು.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ೧೦೦ ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ನಿರ್ಮಾಣ ಕಾಮಗಾರಿಯು ಆರಂಭವಾಗಿದ್ದು, ಕಾಮಗಾರಿಯ ಅಂದಾಜು ಮೊತ್ತ ೨೬೧೫.೦೦ ಲಕ್ಷ ರೂ. ಗಳದ್ದಾಗಿದೆ. ಈ ಕಟ್ಟಡಗಳ ಕಾಮಗಾರಿಯು ಹದಿನೈದು ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗುವುದು. ಮತ್ತು ಬಡವರಿಗೆ ಹಾಗೂ ಗ್ರಾಮೀಣ ಜನರಿಗೆ ಉಪಯುಕ್ತವಾಗುವ ಆಧುನಿಕ ಸಿಟಿಸ್ಕಾö್ಯನ್ ಮಷೀನ್‌ಅನ್ನು ಅಳವಡಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗುವ ಒಳರೋಗಿಗಳಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.
ಜಿಲ್ಲಾಆಸ್ಪತ್ರೆಯು ನೆಲಮಹಡಿ, ಮೊದಲನೆ ಮಹಡಿ, ಎರಡನೆ ಮಹಡಿಗಳನ್ನು ಹೊಂದಿದ್ದು, ಈ ಕಟ್ಟಡದ ನವೀಕರಣ ಕಾರ್ಯವು ಪ್ರಗತಿಯಲ್ಲಿದೆ. ಅಲ್ಲದೆ ಜಿಲ್ಲಾ ಆಸ್ಪತ್ರೆ ಆವರನದಲ್ಲಿ ವೈದ್ಯಾಧಿಕಾರಿಗಳ ನಾಲ್ಕು ವಸತಿ ಗೃಹ, ಶುಶ್ರೂಷಕಿಯರ ಆರು ವಸತಿ ಗೃಹ, ಮತ್ತು ನಾಲ್ಕು ಗ್ರೂಪ್ ಡಿ ಸಿಬ್ಬಂದಿಗಳ ನಾಲ್ಕು ವಸತಿ ಗೃಹಗಳು ನಿರ್ಮಾಣ ವಾಗುತ್ತಿವೆ.
ಆಸ್ಪತ್ರೆಯ ನೆಲಮಹಡಿಯಲ್ಲಿ ಹೊರರೋಗಿಗಳ ವಿಭಾಗ, ಕ್ಷ-ಕಿರಣ ವಿಭಾಗ, ವೈದ್ಯರ ಕೊಠಡಿಗಳು, ಔಷಧ ವಿತರಣಾ ವಿಭಾಗ, ಪ್ರಯೋಗಾಲಯ, ೨೪ ಹಾಸಿಗೆಗಳ ವಾರ್ಡ ವಿಭಾಗ , ಪ್ರಸೂತಿ ವಿಭಾಗ, ಅಲ್ಟಾçಸೌಂಡ ಹಾಗೂ ಶೌಚಾಲಯಗಳನ್ನು ಒಳಗೊಂಡಿದೆ.
ಆಸ್ಪತ್ರೆಯ ಮೊದಲನೆ ಮಹಡಿಯು ಶಸ್ತç ಚಿಕಿತ್ಸಾ ವಿಭಾಗ, ೩೪ ಹಾಸಿಗೆಗಳ ವಾರ್ಡ ಬ್ಲಾಕ್‌ಗಳು, ವೈದ್ಯರ ಕೊಠಡಿಗಳು, ಆಶಾ ಕ್ಲಿನಿಕ್, ಕೌನ್ಸಿಲಿಂಗ್ ಕೊಠಡಿ, ಮಕ್ಕಳ ವೈದ್ಯರ ಕೊಠಡಿ, ನಾಲ್ಕು ವಿಶೇಷ ವಾರ್ಡಗಳು ಹಾಗೂ ಶೌಚಾಲಯಗಳನ್ನು ಒಳಗೊಂಡಿದೆ.

ಆಸ್ಪತ್ರೆಯ ಎರಡನೇ ಮಹಡಿಯು ಕಛೇರಿ ವಿಭಾಗ, ಸಭಾಂಗಣ, ವೈದ್ಯಕೀಯ ಅಧೀಕ್ಷಕರ ಕೋಠಡಿ, ಶೂಶ್ರೂಷಕಿಯರ ಅಧೀಕ್ಷಕರ ಕೊಠಡಿ, ವಾರ್ಡ ಸ್ಟೊÃರ, ಸಿಬ್ಬಂದಿ ಕೊಠಡಿ, ಆಡಳಿತ ಅಧಿಕಾರಿಗಳ ಕೊಠಡಿ, ೩೪ ಹಾಸಿಗೆಗಳ ವಾರ್ಡ ಬ್ಲಾಕ್‌ಗಳು, ನಾಲ್ಕು ವಿಶೇಷ ವಾರ್ಡಗಳು, ಸೆಮಿನಾರ ಹಾಲ್, ಗ್ರಂಥಾಲಯ, ಆಶಾ ಗೃಹಗಳನ್ನು ಒಳಗೊಂಡಿದ್ದು, ಹಾಗೂ ಮಾಡ್ಯೂಲರ್ ಓ.ಟಿಗಳು, ಗ್ಯಾಸ್ ಪೈಪ್‌ಲೈನ್ ಅಳವಡಿಕೆ, ಜನರೇಟರ ಸೆಟ್, ರಸ್ತೆ ಸುಧಾರಿಕರಣ, ಸೋಲಾರ ವಾಟರ ಹೀಟರ್, ಆಸ್ಪತ್ರೆ ಮುಂಭಾಗದ ಕಂಪೌಂಡ ಗೋಡೆ ನಿರ್ಮಾನ, ಲಿಪ್ಟ ಅಳವಡಿಕೆ, ಎ.ಸಿ.ಅಳವಡಿಸುವದು, ವಾಹನ ನಿಲುಗಡೆ ನಿರ್ಮಿಸುವದು ಇನ್ನು ಹಲವಾರು ಸೌಲಭ್ಯಗಳನ್ನು ಒಳಗೊಂಡಿದೆ.
ಈ ಡಯಾಲಿಸಸ್ ನಾಲ್ಕು ಯಂತ್ರಗಳನ್ನು ಈಗಾಗಲೇ ಅಳವಡಿಸಲಾಗಿದ್ದು ಉಚಿತ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕ ಅನುಕೂಲಕ್ಕಾಗಿ ಈ ತೀಂಗಳ ಅಂತ್ಯದಲ್ಲಿ ಇನ್ನೂ ಆರು ಹೊಸ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಶಸ್ತç ಚಿಕಿತ್ಸಾ ಸಂಕೀರ್ಣವನ್ನು ಆಧುನಿಕವಾಗಿ ನವೀಕರಣ ಮಾಡಿದ್ದು ಶಸ್ತç ಚಿಕಿತ್ಸೆ ಮಾಡುವ ಸೌಲಭ್ಯ ಹಾಗೂ ಕ್ಷಮತೆಯನ್ನು ಹೆಚ್ಚಿಸಲಾಗಿದೆ.
ಹೊಸಪೇಟೆಯ ಜಿಂದಾಲ್ ಸ್ಟಿÃಲ್ ವರ್ಕ್ಸ ಕಂಪನಿಯ ಸಿ.ಎಸ್.ಆರ್ ಅನುದಾನದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ರಕ್ತ ವಿಧಳನಾ ಘಟಕವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುತ್ತಿದ್ದು ಈ ತಿಂಗಳ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇಸ್ರೊÃದ ಸಿ.ಎಸ್.ಆರ್ ಅನುದಾನದ ೩೦ ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸುಸಜ್ಜಿತ ಸುಲಭ ಸೌಚಾಲಯ ನಿರ್ಮಾಣ, ಎಳು ವಿಷಯಗಳಲ್ಲಿ ಡಿ.ಎನ್.ಬಿ. ಸ್ನಾತಕೋತ್ತರ ಕೊರ್ಸಗಳ ಪ್ರಾರಂಭ ಹಾಗೂ ಶೋಷಣೆಗೆ ಒಳಗಾದ ಮಹಿಳೆ ಮತ್ತು ಮಕ್ಕಳ ಸಾಂತ್ವನ ಕೇಂದ್ರ ‘ಒನ್ ಸ್ಟಾಫ್’ ವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಶಿಲಾನ್ಯಾಸದ ನಂತರ ಸಚಿವರು ರಿಯಾಯಿತಿ ದರದಲ್ಲಿ ಊಟ ಮತ್ತು ಉಪಹಾರವನ್ನು ರೋಗಿಗಳಿಗೆ ಹಾಗೂ ಸಂಬಂದಿಕರಿಗೆ ವಿತರಿಸಲು ಆಸ್ಪತ್ರೆ ಆವರಣದಲ್ಲಿ ಆಂಭಿಸಿರುವ ನಾಗರಿಕ ಸೌಲಭ್ಯಗಳ ಸಂಕಿರ್ಣಕ್ಕೆ ಭೇಟಿ ನೀಡಿ ಇಡ್ಲಿಯ ರುಚಿ ಸವಿದರು. ನಂತರ ಆಸ್ಪತ್ರೆಯ ವಿವಿಧ ವಾರ್ಡಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿದರು. ಮತ್ತು ನೇತ್ರ ಪರೀಕ್ಷಾ ವಿಭಾಗಕ್ಕೆ ತೆರಳಿ ಸ್ವತಃ ನೇತ್ರ ಪರೀಕ್ಷೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ಎಮ್.ದೊಡ್ಡಮನಿ, ಜಿಲ್ಲಾ ಶಸ್ತç ಚಿಕಿತ್ಸಕ ಡಾ.ಗಿರಿಧರ್ ಆರ್. ಕುಕನೂರ, ಸ್ಥಾನಿಕ ವೈದ್ಯಾಧಿಕಾರಿ ಡಾ.ಸಿ.ಆರ್.ನಾಡಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎಸ್.ಬಿ.ಕಟಕೋಳ, ಡಾ.ವಿ.ವಿ.ಎ. ಮನಗೂಳಿ, ಡಾ.ಎಸ್.ಎ.ಶೇಪೂರ, ಡಾ.ಎಸ್.ಮದಕಟ್ಟಿ, ಡಾ.ಎಸ್.ಎ.ಹಂಗರಗಾ, ಡಾ.ಸಫನ್, ಡಾ. ಆರ್. ರಾಠೋಡ್ ಮತ್ತು ಆಸ್ಪತ್ರೆ ಅಧಿಕ್ಷಕ ಚಂದ್ರಕಾಂತ ಕದಂ ಉಪಸ್ಥಿತರಿದ್ದರು.
ಸಕಲ ಸೌಲಭ್ಯವಿರುವ ಮಾದರಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ನನ್ನ ಗುರಿ: ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಸಕಲ ಸೌಲಭ್ಯವಿರುವ ಮಾದರಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ನನ್ನ ಗುರಿ: ಉಸ್ತುವಾರಿ ಸಚಿವ ವಿನಯ ಕುಲಕರ್ಣಿ Reviewed by MediaMind24x7 Team on March 06, 2018 Rating: 5

No comments:

Powered by Blogger.