Contact For Add

ಎಪ್ರಿಲ್ 17 ರಂದು ಹಾವೇರಿ ತಾಲೂಕು ಮಟ್ಟದಲ್ಲಿ “ವೋಟಾಟ-2018” ಕ್ರೀಡಾಕೂಟ

ಹಾವೇರಿ:ಎ.12(ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭೆ ಚುನಾವಣೆ ಅಂಗವಾಗಿ ಯುವ ಮತದಾರರಿಗೆ ಮತದಾನದ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಹಾವೇರಿ ತಾಲೂಕು ಮಟ್ಟದ “ವೋಟಾಟ-2018” ಕಾರ್ಯಕ್ರಮವನ್ನು ಎಪ್ರಿಲ್ 17 ರಂದು ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.


ಜಿಲ್ಲೆಯ 18 ರಿಂದ 25 ವರ್ಷದೊಳಗಿನ ಯುವಕ, ಯುವತಿಯರಿಗೆ ಕಬಡ್ಡಿ, ವಾಲಿಬಾಲ್, ಮ್ಯೂಸಿಕಲ್ ಛೇರ್(ಮಹಿಳೆಯರಿಗೆ ಮಾತ್ರ) ಹಾಗೂ ಹಗ್ಗ ಜಗ್ಗಾಟ(ಪುರುಷರಿಗೆ ಮಾತ್ರ) ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸಲು ಆಸಕ್ತ ಹಾಗೂ ಅರ್ಹ ಯುವಕ, ಯುವತಿಯರು ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್ ಹಾಗೂ ಎರಡು ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರದೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ವಿಜೇತರಿಗೆ ಆಕರ್ಷಕ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುವುದು.
ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಎಪ್ರಿಲ್ 28 ರಂದು ಹಾವೇರಿ ನಗರದಲ್ಲಿ ಆಯೋಜಿಸಲಾಗಿದ್ದು, ತಾಲೂಕಾ ಮಟ್ಟದಲ್ಲಿ ಆಯ್ಕೆಯಾದ ತಂಡಗಳು ಎಪ್ರಿಲ್ 28 ರಂದು ಬೆಳಿಗ್ಗೆ 9-30ಕ್ಕೆ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ತಂಡಗಳಿಗೆ ಟೀಶರ್ಟ್ ಮತ್ತು ಕ್ಯಾಪ್ ವಿತರಿಸಿ ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾವೇರಿ ದೂರವಾಣಿ ಸಂಖ್ಯೆ:08375-232070ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಪ್ರಿಲ್ 17 ರಂದು ಹಾವೇರಿ ತಾಲೂಕು ಮಟ್ಟದಲ್ಲಿ “ವೋಟಾಟ-2018” ಕ್ರೀಡಾಕೂಟ ಎಪ್ರಿಲ್ 17 ರಂದು ಹಾವೇರಿ ತಾಲೂಕು ಮಟ್ಟದಲ್ಲಿ “ವೋಟಾಟ-2018” ಕ್ರೀಡಾಕೂಟ Reviewed by MediaMind24x7 Team on April 12, 2018 Rating: 5

No comments:

Powered by Blogger.