Contact For Add

ಪ್ರಯಾಣಿಕರೊಂದಿಗೆ ಮತದಾನ ಕುರಿತು ಡಿ.ಸಿ.ವೆಂಕಟೇಶ್ ಸಂವಾದ

ಹಾವೇರಿ:ಎ.11(ಕರ್ನಾಟಕ ವಾರ್ತೆ): ಹಾವೇರಿ ನಗರ ಕೇಂದ್ರದಿಂದ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಲು ಸಜ್ಜಾದ ಪ್ರಯಾಣಿಕರೊಂದಿಗೆ ವಿಧಾನಸಭಾ ಚುನಾವಣೆಯ ಪ್ರಕ್ರಿಯೆಗಳು, ಮತದಾನದ ಮಹತ್ವ ಕುರಿತಂತೆ ವಿವರಣೆ ನೀಡಿ ಮತದಾನ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಜಾಗೃತಿ ಮೂಡಿಸಿದರು.
 
ಬುಧವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾದ ಕವಿಗೋಷ್ಠಿ, ಬೀದಿನಾಟಕ ಹಾಗೂ ಜಾಗೃತಿ ಗೀತ ಗಾಯನ ಕಾರ್ಯಕ್ರಮದ ತರುವಾಯು ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ ವಿಧಾನಸಭಾ ಮತದಾನ ದಿನಾಂಕ ಹಾಗೂ ಮತದಾನ ಮಾಡುವ ಕುರಿತಂತೆ ತಿಳುವಳಿಕೆ ನೀಡಿದರು. ಮತದಾನ ಮಾಡುವಂತೆ ಸಲಹೆ ನೀಡಿದರು.
ವಿವಿಧ ಗ್ರಾಮಗಳಿಗೆ ಸಂಚರಿಸುವ ಗ್ರಾಮೀಣ ಬಸ್‍ಗಳನ್ನು ಏರಿದ ಜಿಲ್ಲಾಧಿಕಾರಿಗಳು ಕರಪತ್ರಗಳನ್ನು ನೀಡಿ ಮತದಾನದ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಹಿಳಾ ಕಂಡಕ್ಟರ್‍ಗೆ ಕರಪತ್ರ ನೀಡಿ ತಪ್ಪದೆ ಮತದಾನ ಮಾಡಿ ಎಂದು ತಿಳುವಳಿಕೆ ನೀಡಿದರು.
ಜಿಲ್ಲಾಧಿಕಾರಿಗಳಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಹಾಗೂ ಇತರ ಅಧಿಕಾರಿಗಳು ಸಾಥ್ ನೀಡಿದರು.
ಪ್ರಯಾಣಿಕರೊಂದಿಗೆ ಮತದಾನ ಕುರಿತು ಡಿ.ಸಿ.ವೆಂಕಟೇಶ್ ಸಂವಾದ ಪ್ರಯಾಣಿಕರೊಂದಿಗೆ ಮತದಾನ ಕುರಿತು ಡಿ.ಸಿ.ವೆಂಕಟೇಶ್ ಸಂವಾದ Reviewed by MediaMind24x7 Team on April 12, 2018 Rating: 5

No comments:

Powered by Blogger.