ಇ.ವಿ.ಎಂ ಹಾಗೂ ವಿ.ವಿ.ಪ್ಯಾಡ್ ಯಂತ್ರ ಬಳಕೆ ಕುರಿತು ಕಾರ್ಯಾಗಾರ
ಧಾರವಾಡ (ಕರ್ನಾಟಕ ವಾರ್ತೆ) ಏ.೧೨; ಜಿಲ್ಲಾ ಸ್ವೀಪ್ ಸಮಿತಿಯು ಕರ್ನಾಟಕ ವಿಧಾನಸಭಾ
ಚುನಾವಣೆಯಲ್ಲಿ ಇವಿಎಂ ಹಾಗೂ ವಿವಿಪ್ಯಾಡ್ ಮತಯಂತ್ರ ಬಳಕೆ ಕುರಿತು, ಜಿಲ್ಲೆಯ
ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರೆöÊಸ್ತ ಹಾಗೂ ಜೈನ ಸಮಾಜಗಳ ಮುಖಂಡರಿಗೆ
ಜಿ.ಪಂ.ಸಭಾಂಗಣದಲ್ಲಿ ಇಂದು ಕಾರ್ಯಾಗಾರ ನಡೆಯಿತು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ, ಜಿ.ಪಂ. ಸಿಇಓ ಸ್ನೇಹಲ್ ಆರ್ ಮಾತನಾಡಿ, ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಬಾರಿ ವಿವಿಪ್ಯಾಟ್ ಬಳಕೆಗೆ ಬರುತ್ತಿದೆ. ಅದರ ಬಗ್ಗೆ ಎಲ್ಲಾ ಜನಸಾಮಾನ್ಯರಿಗೆ ತಿಳುವಳಿಕೆ ನೀಡುವ ಜವಾಬ್ದಾರಿಯು ಮುಖಂಡರ ಮೇಲಿರುತ್ತದೆ. ಏ.೧೪ ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ನಿಮ್ಮ ಮತಗಟ್ಟೆ, ತಹಸೀಲ್ದಾರ ಕಚೇರಿ ಅಥವಾ ಮತದಾರರ ಸೌಲಭ್ಯ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದು. ೯೭೩೧೯೭೯೮೯೯ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್.ಕಳಿಸಿ ಮತಗಟ್ಟೆ ಮಾಹಿತಿ ಪಡೆಯಬಹುದು.೧೮೦೦ ೧೧ ೧೯೫೦ ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಚುನಾವಣಾ ಆಯೋಗ ಸೂಚಿಸಿದ ಇತರ ಯಾವುದೇ ಗುರುತಿನ ಕಾರ್ಡ ಬಳಸಿ ಮತ ಹಾಕಬಹುದು.ಈ ಬಾರಿ ವಿಶೇಷಚೇತನರಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮತದಾನ ಮಾಡಲು ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಯಾವುದೇ ಆಮಿಷಗಳಿಗೆ ಒಳಗಾಗದೇ ಎಲ್ಲರೂ ನ್ಯಾಯಸಮ್ಮತವಾಗಿ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನವೀನ ಶಿಂತ್ರೆ, ಪ್ರೊಬೇಷನರಿ ಎ.ಸಿ. ಶೇಖರ್.ಜಿ.ಡಿ ಅವರು ಇವಿಎಂ ಹಾಗೂ ವಿವಿಪ್ಯಾಟ್ ಬಳಕೆ ಕುರಿತು ತರಬೇತಿ ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ವಿಶ್ವಾಸಾರ್ಹತೆ ಹೆಚ್ಚಿಸಲು ವಿವಿಪ್ಯಾಟ್ ಯಂತ್ರಗಳು ಸಹಕಾರಿಯಾಗಿವೆ ಎಂದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಸಮುದಾಯಗಳ ಮುಖಂಡರು ತಮ್ಮ ಸಂದೇಶಗಳನ್ನು ಚರ್ಚಿಸಿ, ಪರಿಹಾರ ಪಡೆದುಕೊಂಡರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ.ಎಸ್.ದೊಡ್ಡಮನಿ ಸ್ವಾಗತಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಎಪಿಸಿ ಕೆ.ಎಂ.ಶೇಖ್ ನಿರೂಪಿಸಿದರು. ಡಾ.ಈಶ್ವರ ಸಾತಿಹಾಳ ವಂದಿಸಿದರು.

Reviewed by MediaMind24x7 Team
on
April 12, 2018
Rating:
Reviewed by MediaMind24x7 Team
on
April 12, 2018
Rating:

No comments: