Contact For Add

ಸಪ್ತಪದಿ ತುಳಿದ ಧ್ರುವ ಸರ್ಜಾ- ಪ್ರೇರಣಾ ಶಂಕರ್

ಬೆಂಗಳೂರು: ಕನ್ನಡದ ಖ್ಯಾತ ನಟ ಧ್ರುವ್ ಸರ್ಜಾ ಅವರು ಭಾನುವಾರ ಸಪ್ತಪದಿ ತುಳಿದರು.
ಬೆಂಗೂರಿನ ಜೆ.ಪಿ. ನಗರದ ಸಂಸ್ಕೃತ ಬೃಂದಾವನ ಕನ್ವೆಷನ್ ಹಾಲ್‌ನಲ್ಲಿ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಸಪ್ತಪದಿ ತುಳಿದರು.
ಬೆಳಿಗ್ಗೆ 7.15ರಿಂದ 7.45ರ ವೃಶ್ಚಿಕ ಶುಭ ಲಗ್ನದಲ್ಲಿ ಈ ಇಬ್ಬರೂ ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು. ತಿರುಪತಿ ವೆಂಕಟೇಶ್ವರ ಥೀಮ್‌ನಲ್ಲಿ ಮದುವೆ ಮಂಟಪ ಅಲಂಕೃತಗೊಂಡಿತ್ತು. 
ಬ್ಯಾಕ್ ಡ್ರಾಪ್ ನಲ್ಲಿ ಶಿವ-ಪಾರ್ವತಿ, ಗಣಪ ಮಂಟಪಗಳನ್ನು‌ ನಿರ್ಮಿಸಲಾಗಿತ್ತು.
ಮೊದಲಿಗೆ ಸೋದರ ಮಾವನ ಕೈಯಲ್ಲಿ ವಧುವಿಗೆ ಕಂಕಣ ಧಾರಣೆ ಮಾಡಲಾಯಿತು. ಬಳಿಕ ವರನಿಗೆ ಸೋದರ ಮಾವನಿಂದ ಕಂಕಣ ಧಾರಣೆ ಮಾಡಿಸಲಾಯಿತು. 
18 ಪುರೋಹಿತರು ಮದುವೆ ಶಾಸ್ತ್ರಗಳನ್ನು ನಡೆಸಿಕೊಟ್ಟರು. ಗೋಪೂಜೆಗಾಗಿ ಐದು ಹಸುಗಳನ್ನು ತರಿಸಲಾಗಿತ್ತು. ಎರಡು ಕುಟುಂಬದ ಸದಸ್ಯರು, ಧ್ರುವ ಅವರ ಅಭಿಮಾನಿಗಳು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಸಪ್ತಪದಿ ತುಳಿದ ಧ್ರುವ ಸರ್ಜಾ- ಪ್ರೇರಣಾ ಶಂಕರ್ ಸಪ್ತಪದಿ ತುಳಿದ ಧ್ರುವ ಸರ್ಜಾ- ಪ್ರೇರಣಾ ಶಂಕರ್ Reviewed by MediaMind24x7 Team on November 23, 2019 Rating: 5

No comments:

Powered by Blogger.