ಬೆಂಗಳೂರು ನಿಮ್ಹಾನ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಯಾ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ : 16
ಹುದ್ದೆಗಳ ವಿವರ ಇತರೆ
ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ – 03
ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ (ಸ್ಕೀಮ್ ಬಿ) – 02
ಡಾಟಾ ಎಂಟ್ರಿ ಆಪರೇಟರ್ – 04
ಕಿರಿಯ ವೈಜ್ಞಾನಿಕ ಅಧಿಕಾರಿ – 01
ಸಂಶೋಧನಾ ಆಧಿಕಾರಿ – 01
ಫಾಲೋಅಪ್ ಕೌನ್ಸೆಲರ್ – 01
ಸಹಾಯಕ ತಾಂತ್ರಿಕ – 01
ರಿಸಿಪ್ಷನಿಸ್ಟ್ ಕಮ್ ಆಫೀಸ್ ಅಸಿಸ್ಟೆಂಟ್ – 01
ವಿದ್ಯಾರ್ಹತೆ :
ಸೈಕಿಯಾಟ್ರಿಕ್ ಸೋಷಿಯಲ್ ವರ್ಕ ವಿಷಯದಲ್ಲಿ ಎಂ.ಫಿಲ್, ಸೋಷಿಯಲ್ ವರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಬಿಎಸ್ಸಿ / ಎಂಎಸ್ಸಿ, ಬಯೋಲಾಜಿಕಲ್ ಸೈನ್ಸ್ ವಿಷಯದಲ್ಲಿ ಎಂಎಸ್ಸಿ ಸೋಷಿಯಲ್ ವರ್ಕ ವಿಷಯದಲ್ಲಿ ಎಂಎ/ಎಂಎಸ್‍ಡಬ್ಲ್ಯೂ, ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಸಮಾಜ ವಿಜ್ಞಾನದಲ್ಲಿ ಪದವಿ, ವಿಜ್ಞಾನದಲ್ಲಿ ಪದವಿ, ಯಾವುದೆ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಗರಿಷ್ಠ ಕೆಲ ಹುದ್ದೆಗಳಿಗೆ 35 ವರ್ಷಗಳು, ಉಳಿದ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 30 ವರ್ಷಗಳು
ಶುಲ್ಕ : ಪ.ಜಾ, ಪ.ಪಂದ ವರ್ಗದವರಿಗೆ 250 ರೂ, ಇತರ ವರ್ಗದವರಿಗೆ 500 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ದಿ ರಿಜಿಸ್ಟರ್, ನಿಮಾನ್ಸ್, ಅಂಚೆ ಪೆಟ್ಟಿಗೆ ಸಂಖ್ಯೆ 2900, ಹೊಸೂರು ರಸ್ತೆ, ಬೆಂಗಳೂರು – 560029 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ : 07-07-2018
ಬೆಂಗಳೂರು ನಿಮ್ಹಾನ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Reviewed by MediaMind24x7 Team
on
July 04, 2018
Rating:
Reviewed by MediaMind24x7 Team
on
July 04, 2018
Rating:
No comments: